ಕೆ.ಎನ್.ಪಿ.ಡಿ.17,ಜೀವನಶೈಲಿ

ಹಲವಾರು ಕಾರಣಗಳಿಂದ ಅಕಾಲಿಕವಾಗಿ ಕೂದಲುಬಿಳಿಯಾಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಕಲುಷಿತ ವಾತಾವರಣ, ಹಾರ್ಮೋನು ಅಸಮತೋಲನ, ಪೋಷಕಾಂಶಗಳ ಕೊರತೆ ಮತ್ತು ವಂಶವಾಹಿನಿ ಮೊದಲಾದವುಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ಕಪ್ಪು ಮಾಡಲು ರಾಸಾಯನಿಕಯುಕ್ತ ಹೇರ್ ಡ್ರೈಗಳನ್ನು  ಬಳಸುತ್ತಿದ್ದೇವೆ. ಇದರಿಂದ ಹಲವಾರು ರೀತಿಯ ಪರಿಣಾಮಗಳು ಆಗುತ್ತಿವೆ. ಕೆಲವರಿಗೆ ರಾಸಾಯನಿಕಯುಕ್ತ ಹೇರ್ ಡೈ ನಿಂದ ಅಲರ್ಜಿಯಾಗುವುದು. ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಕೂದಲು ಕಪ್ಪಾಗಿಸಬಹುದು ಮತ್ತು ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡಬೇಕು. ಕೂದಲನ್ನು ಬಿಳಿಯಾಗಿಸುವ ಕೆಲವೊಂದು ಮನೆಮದ್ದುಗಳನ್ನು ಸೂಚಿಸಲಾಗಿದೆ. ಇದನ್ನು ತಿಳಿಯಿರಿ.

ತೆಂಗಿನ ಎಣ್ಣೆ ಮತ್ತು ಲಿಂಬೆ :

ಲೌರಿಕ್ ಆಮ್ಲ, ಸೂಕ್ಷ್ಮಾಣುಜೀವಿ ವಿರೋಧಿ ಗುಣ ಹಾಗೂ ಮಧ್ಯಮ ಮಟ್ಟದ ಕೊಬ್ಬಿನಾಮ್ಲವು ತಲೆಬುರುಡೆಗೆ ತೇವಾಂಶ ನೀಡಿ, ಕೂದಲನ್ನು ಬಲಗೊಳಿಸಿ ಕೂದಲು ಬೆಳೆಯಲು ನೆರವಾಗುವುದು. ಹಾನಿಗೊಂಡಿರುವ ಮತ್ತು ಹಾನಿಗೊಳ್ಳದೆ ಇರುವ ಕೂದಲಿನಲ್ಲಿ ಉಂಟಾಗುವ ಪ್ರೋಟೀನ್‌ನ ಕೊರತೆಯನ್ನು ಇದು ನೀಗಿಸುವುದು.

ಆ್ಯಂಟಿ ಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಇದನ್ನು ದೀರ್ಘಕಾಲದ ತನಕ ಬಳಸಿದರೆ ಕೂದಲು ಬಿಳಿಯಾಗುವುದನ್ನು ತಡೆಯಬಹುದು. ಕೂದಲು ಬಿಳಿಯಾಗುವುದನ್ನು ತಡೆಯಲು ವೈದ್ಯರು ಲಿಂಬೆಯನ್ನು ಸೂಚಿಸುತ್ತಾರೆ. ಲಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಪೋಸ್ಪರಸ್ ಇರುತ್ತದೆ. ಇದು ಕೂದಲಿಗೆ ಪೋಷಕಾಂಶವನ್ನು ನೀಡಿ ಬಿಳಿ ಕೂದಲನ್ನು ತೆಗೆಯುವುದು.

ಬೇಕಾಗುವ ಸಾಮಗ್ರಿಗಳು

*ತೆಂಗಿನ ಎಣ್ಣೆ

*ಮೂರು ಚಮಚ ಲಿಂಬೆರಸ

ತಯಾರಿಸುವ ವಿಧಾನ

ತೆಂಗಿನ ಎಣ್ಣೆಯಲ್ಲಿ ಮೂರು ಚಮಚ ಲಿಂಬೆರಸವನ್ನು ಬೆರೆಸಿ. ತಲೆಬುರುಡೆಗೆ ಇದನ್ನು ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ಒಂದು ಗಂಟೆ ಕಾಲ ಇದು ಕೂದಲಿನಲ್ಲಿ ಹಾಗೆ ಇರಲಿ. ಕೂದಲನ್ನು ಶಾಂಪೂ ಹಾಕಿಕೊಂಡು ತೊಳೆದು ಸ್ವಚ್ಛಗೊಳಿಸಿ.

ವಾರದಲ್ಲಿ ಒಂದು ಸಲ ಹೀಗೆ ಮಾಡಿಕೊಳ್ಳಿ. ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಬಳಸಿದರೆ ತಲೆಹೊಟ್ಟನ್ನು ನಿವಾರಿಸಬಹುದು. ತೆಂಗಿನ ಎಣ್ಣೆ, ಹರಳೆಣ್ಣೆ ಮತ್ತು ಉಗುರುಬೆಚ್ಚಗಿನ ನೀರು ತಲೆಹೊಟ್ಟಿಗೆ ತುಂಬಾ ಒಳ್ಳೆಯದು. ತಲೆಬುರುಡೆಯನ್ನು ಸರಿಯಾಗಿ ಮಸಾಜ್ ಮಾಡಿಕೊಂಡು ಅತ್ಯುತ್ತಮ ಫಲಿತಾಂಶ ಪಡೆಯಿರಿ.