ಕೆ.ಎನ್.ಪಿ.ವಾರ್ತೆ, ದಾವಣಗೆರೆ,ಫೆ.10;

ಕೊಟ್ಟೂರೇಶ್ವರ ರಥೋತ್ಸವದ ಪ್ರಯುಕ್ತ ಪಾದಯಾತ್ರಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಾಳೆ ಬಳ್ಳಾರಿ ಜಿಲ್ಲೆ ಕೊಟ್ಟೂರಿನಲ್ಲಿ ನಡೆಯಲಿರುವ ಕೊಟ್ಟೂರೇಶ್ವರ ರಥೋತ್ಸವದ ಪ್ರಯುಕ್ತ, ಜಗಳೂರು ಪಟ್ಟಣದ ಶ್ರೀ ಮದ್ಗವಿ ಶಾಂತವೀರ ಯತೀಂದ್ರ ಮಹಾಸ್ವಾಮಿಗಳ ಮಠದಲ್ಲಿ, ಕೊಟ್ಟೂರೇಶ್ವರ ಭಕ್ತ ಮಂಡಳಿ ವತಿಯಿಂದ ಪಾದಯಾತ್ರಿಗಳಿಗೆ  ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇನ್ನೂ ಜಗಳೂರು ಪಟ್ಟಣದ ಪಾಪಿಲಿಂಗೇಶ್ವರ ದೇವಸ್ಥಾನದಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಈ ವೇಳೆ 21 ವರ್ಷಗಳಿಂದ ಅನ್ನ ಸಂತರ್ಪಣೆ ಮಾಡುತ್ತಿರುವ ಸಾವಿತ್ರಮ್ಮ ಹಾಗೂ ಇವರ ಪುತ್ರರಾದ ಶಂಭುಲಿಂಗಪ್ಪ ನವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಂಭುಲಿಂಗಪ್ಪ, ಸಾವಿತ್ರಮ್ಮ, ಮಹಸ್ವಾಮೀ, ನಾಗರಾಜ್, ವಾಗೇಶ್, ಕೊಟ್ರೇಶ್ ಕೆ.ಸಿ, ಹುಲಕುಂಟ ಶೆಟ್ಟಿ, ಕರವೇ ಅಧ್ಯಕ್ಷ ಎಂ.ವೈ.ಮಹಂತೇಶ್, ಜಗದೀಶ್, ಹರ್ಷ ಲಿಂಗರಾಜ, ವಿರುಪಾಕ್ಷಪ್ಪ ಮಟ್ಟಿ, ಸುರೇಶ್ ಎಸ್.ಬಿ, ಬಿ.ಟಿ.ರವಿ ಸೇರಿದಂತೆ ಕೊಟ್ಟೂರೇಶ್ವರ ಭಕ್ತ ಮಂಡಳಿ ಮುಖಂಡರು, ಸದಸ್ಯರು ಮತ್ತು ಪಾದಯಾತ್ರಿಗಳು, ಭಕ್ತರು ಹಾಜರಿದ್ದರು.

ವರದಿ : ಮಹಮ್ಮದ್ ಅಬ್ದುಲ್ ರಖೀಬ್