ಶಿವಮೊಗ್ಗ/ಶಿರಸಿ: ಅಡಿಕೆ ಧಾರಣೆ ಕಳೆದ ಒಂದು ತಿಂಗಳಿಂದ ಕುಸಿತದ ಹಾದಿಯಲ್ಲಿ ಸಾಗಿದ್ದು ಮೂರು ವರ್ಷದ ಹಿಂದಿನ ದರಕ್ಕೆ ಬಂದು ನಿಂತಿದೆ. ಬೆಲೆ ಇಳಿಕೆ ಬೆಳಗಾರರಲ್ಲಿ ಆತಂಕ ಸೃಷ್ಟಿ ಮಾಡಿದೆ. ಜೂನ್‌ ಮಧ್ಯಭಾಗದಲ್ಲಿ ಕ್ವಿಂಟಲ್‌ಗೆ46,400 ರು. ತಲುಪಿದ್ದ ಧಾರಣೆ ನಂತರ ಇಳಿಮುಖವಾಗತೊಡಗಿ, ಜುಲೈ ಮೊದಲ ವಾರ 36 ಸಾವಿರಕ್ಕೆ ತಲುಪಿತ್ತು. ಆದರೆ ಇದೀಗ ಏಕಾಏಕಿ 25 ಸಾವಿರಕ್ಕಿಂತ ಕೆಳಕ್ಕೆ ಕುಸಿದಿದೆ.