ಕೆ.ಎನ್.ಪಿ.ವಾರ್ತೆ, ದಾವಣಗೆರೆ,ಫೆ.09;
ಅಗ್ನಿ ಅವಘಡದಿಂದಾಗಿ ಮೇವಿನ ಬಣವಿಗಳು ಸುಟ್ಟು ಭಸ್ಮವಾಗಿವೆ.
ಈ ಘಟನೆ ಆಲೂರ್ ನಲ್ಲಿ ಜರುಗಿದ್ದು, ಅವಘಡದಲ್ಲಿ ದನಗಳಿಗೆ ಕೂಡಿಟ್ಟಿದ್ದ ಅಪಾರ ಪ್ರಮಾಣದ ಮೇವಿನ ಬಣವಿಗಳು ಅಗ್ನಿಗೆ ಆಹುತಿಯಾಗಿವೆ. ಘಟನೆಯ ಕಾರಣ ಇನ್ನೂ ತಿಳಿದು ಬಂದಿಲ್ಲ.
ರೈತನಾದ ನಾಗರಾಜು ಹಾಗೂ ರಾಜು ಎನ್ನುವರಿಗೆ ಸೇರಿದ ಸುಮಾರು 4 ಬಣವಿಗಳು ಸುಟ್ಟು ಭಸ್ಮಗೊಂಡಿವೆ. ಈ ವೇಳೆ ಗ್ರಾಮಸ್ಥರು ನೀರಿನ ಟ್ಯಾಂಕರ್ ತಂದು ಅಗ್ನಿ ನಂದಿಸಲು ಪ್ರಯತ್ನಿಸಿದರು. ಮನೆಯವರು ತೊಟ್ಟಿಲು ಕಾರ್ಯಕ್ರಮದ ಪ್ರಯುಕ್ತ ಬೇರೆ ಊರಿಗೆ ಹೋದಾಗ ಈ ಘಟನೆ ನಡೆದಿದೆ.
ವರದಿ : ಬಸವರಾಜ್ ಪೂಜಾರ್